ಸಂಸ್ಥೆಯ ಪ್ರಕಾರ | Division of Daimler AG |
---|---|
ಸ್ಥಾಪನೆ | 1881 |
ಸಂಸ್ಥಾಪಕ(ರು) | Gottlieb Daimler, Karl Benz |
ಮುಖ್ಯ ಕಾರ್ಯಾಲಯ | Stuttgart, Baden-Württemberg |
ವ್ಯಾಪ್ತಿ ಪ್ರದೇಶ | Worldwide (except Mercedes-Benz vehicles and services with other distributors worldwide) |
ಪ್ರಮುಖ ವ್ಯಕ್ತಿ(ಗಳು) | Dieter Zetsche, CEO |
ಉದ್ಯಮ | Automotive industry |
ಉತ್ಪನ್ನ | Automobiles Trucks Buses Internal combustion engines |
ಸೇವೆಗಳು | Automotive financial services |
ಪೋಷಕ ಸಂಸ್ಥೆ | Daimler AG |
ಜಾಲತಾಣ | Mercedes-Benz.com |
ಮರ್ಸಿಡಿಸ್-ಬೆನ್ಜ್ ಎಂಬುದು ಐಷಾರಾಮಿ ವಾಹನಗಳು/ಕಾರುಗಳು, ಬಸ್ಗಳು, ಸಾರೋಟು/ಜಟಕಾ/ಕೋಚುಗಳು, ಹಾಗೂ ಟ್ರಕ್ಗಳ ಜರ್ಮನ್ ಉತ್ಪಾದಕ ಸಂಸ್ಥೆ. ಪ್ರಸ್ತುತ ಇದು ಮೂಲ ಕಂಪೆನಿ, ಡೈಮ್ಲರ್ AG (ಹಿಂದಿನ ಡೈಮ್ಲರ್ ಕ್ರಿಸ್ಲರ್ AG)ನ ವಿಭಾಗ ಮಾತ್ರವೇ ಆಗಿದ್ದು, ಹಿಂದೆ ಡೈಮ್ಲರ್ -ಬೆನ್ಝ್/ಬೆನ್ಜ್ನ ಮಾಲೀಕತ್ವದಲ್ಲಿತ್ತು. ಮರ್ಸಿಡಿಸ್-ಬೆನ್ಜ್ ಕಾರ್ಲ್ ಬೆನ್ಝ್/ಬೆನ್ಜ್'ರ ೧೮೮೬ರ,[೧] ಜನವರಿಯಲ್ಲಿ ನಿರ್ಮಿಸಲಾದ ಪ್ರಥಮ ಪೆಟ್ರೋಲ್-ಚಾಲಿತ ಮೋಟರ್ಸೈಕಲ್/ಮೋಟಾರುದ್ವಿಚಕ್ರ/ದ್ವಿಚಕ್ರವಾಹನ ಹಾಗೂ ಗಾಟ್ಲೀಬ್ ಡೈಮ್ಲರ್ರ ವಾಹನ ಹಾಗೂ ಅದೇ ವರ್ಷದಲ್ಲಿ ವಾಸ್ತುಶಿಲ್ಪಿ/ಎಂಜಿನಿಯರ್ ವಿಲ್ಹೆಲ್ಮ್ ಮೇಬ್ಯಾಚ್/ಮೇಬಾಷ್'ರು ೧೮೭೩ರ ಬೊಲ್ಲೀ ಹಬೆ-ಎಂಜಿನ್ ವಾಹನಕ್ಕೆ ಪೆಟ್ರೋಲ್ ಎಂಜಿನ್ ಸೇರಿಸಿ ನಿರ್ಮಿಸಿದ ಪರಿವರ್ತಿತ ವಾಹನಗಳನ್ನು ಆಧರಿಸಿದೆ. ಮರ್ಸಿಡಿಸ್ ವಾಹನವನ್ನು ಮೊದಲಿಗೆ ೧೯೦೧ರಲ್ಲಿ ಡೈಮ್ಲರ್ ಮೊಟೊರೆನ್ ಜೆ/ಗೆಸೆಲ್ಷಾಫ್ಟ್ ಸಂಸ್ಥೆಯು ಮಾರುಕಟ್ಟೆಗೆ ಬಿಟ್ಟಿತು. ಡೈಮ್ಲರ್ -ಬೆನ್ಝ್/ಬೆನ್ಜ್ ಕಂಪೆನಿಯ ಹೆಸರಿನಡಿ ಕಾರ್ಲ್ ಬೆನ್ಝ್/ಬೆನ್ಜ್'ರ ಹಾಗೂ ಗಾಟ್ಲೀಬ್ ಡೈಮ್ಲರ್'ರ ಕಂಪೆನಿಗಳ ವಿಲೀನವಾದ ನಂತರ ಮೊದಲ ಮರ್ಸಿಡಿಸ್-ಬೆನ್ಜ್ ಬ್ರಾಂಡ್ ಹೆಸರಿನ ವಾಹನಗಳನ್ನು ೧೯೨೬ರಲ್ಲಿ ಉತ್ಪಾದಿಸಲಾಯಿತು.[೧] ಮರ್ಸಿಡಿಸ್-ಬೆನ್ಜ್ ಅನೇಕ ತಾಂತ್ರಿಕ ಹಾಗೂ ಸುರಕ್ಷತಾ ಹೊಸತನಗಳನ್ನು ಪರಿಚಯಿಸಿದ್ದು, ಹಲವು ವರ್ಷಗಳ ನಂತರ ಅವು ಇತರೆ ವಾಹನಗಳಲ್ಲಿ ಸಾಮಾನ್ಯವಾಗಿ ಲಭ್ಯವಾಗುವಂತಿವೆ.[೨]
ಹೊಸದಾಗಿ ರಚಿಸಲಾದ ವಾಹನ ಕಂಪೆನಿಯಾದ ಮರ್ಸಿಡಿಸ್-ಬೆನ್ಜ್ ತಮ್ಮ ಔದ್ಯಮಿಕ ಸಂಯೋಗವನ್ನು ಸಂಕೇತಿಸುವ ಹೊಸ ರೂಪಕದ ಅಗತ್ಯ ಕೂಡ ಹೊಂದಿತ್ತು. ಅವರ ಲಾಂಛನವಾದ ಮೂರು-ಬಿಂದುಗಳ ನಕ್ಷತ್ರವು ವ್ಯಾಪಕತೆಯನ್ನು ಹೊಂದಿರುವುದಲ್ಲದೇ ವಿಶ್ವದಾದ್ಯಂತ ತಪ್ಪಿಲ್ಲದೇ ಗುರುತಿಸಲ್ಪಡುತ್ತದೆ. ಆದರೆ ಅದರ ವಿನ್ಯಾಸವು ಕಂಪೆನಿಯು ೧೯೨೬ರಲ್ಲಿ ವಿಲೀನಗೊಂಡ ನಂತರ ಅನೇಕ ವಿಧಗಳಲ್ಲಿ ವಿಕಸಿತವಾಗಿದೆ. ೧೬ ಆಗಸ್ಟ್ ೧೯೨೯ರ ಶುಕ್ರವಾರದಂದು ಯುನೈಟೆಡ್ ಸ್ಟೇಟ್ಸ್ನಲ್ಲಿ ಮೊದಲಿನ ಲೋಗೋವನ್ನು ವ್ಯಾವಹಾರಿಕ ಲಾಂಛನವಾಗಿ ನೊಂದಾಯಿಸಲಾಯಿತು. ಮರ್ಸಿಡಿಸ್-ಬೆನ್ಜ್ ನ ಪರವಾಗಿ ಜರ್ಮನಿಯ ಬರ್ಲಿನ್ ನಗರದ ಡೈಮ್ಲರ್ -ಬೆನ್ಝ್/ಬೆನ್ಜ್ ಅಕ್ತಿಎಂಜೆಸೆಲ್ಸ್ಷಾಫ್ಟ್ರು USPTOಗೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಅಲೋಹ ನಿರ್ಮಾಣ ವಸ್ತುಗಳ ಪ್ರಧಾನ ವರ್ಗದಲ್ಲಿ ಸಲ್ಲಿಸಿದುದಲ್ಲದೇ, "ಸ್ವಯಂಚಾಲಿತ ವಾಹನಗಳು, :ಪ್ರಯಾಣಿಕ ಕಾರುಗಳು ಹಾಗೂ ಸರಕು ಸಾಗಣೆ ಟ್ರಕ್ಗಳು; ಅವುಗಳ ಭಾಗಗಳು ಹಾಗೂ ಉಪಕರಣಗಳು …ಗಳನ್ನು ಒಳಗೊಂಡಿತ್ತು" ಎಂಬುದೂ ಸೇರಿದಂತೆ ವಿವರಣೆಗಳನ್ನು ಹೊಂದಿತ್ತು...."
ಮರ್ಸಿಡಿಸ್-ಬೆನ್ಜ್ ಅಂಕಿತ ಲೋಗೋದ ವಿನ್ಯಾಸವನ್ನು USPTO ಮೂರು ಅಂಶಗಳೊಂದಿಗೆ ವಿವರಿಸಿದೆ, ೧) ಮೂರು ಬಿಂದುಗಳೊಂದಿಗೆ ನಕ್ಷತ್ರಗಳು (ಆಕಾಶಕಾಯಗಳು, ನೈಸರ್ಗಿಕ ವಿದ್ಯಮಾನಗಳು, ಭೌಗೋಳಿಕ ನಕ್ಷೆಗಳು — ನಕ್ಷತ್ರಗಳು, ಧೂಮಕೇತುಗಳು), ೨) ಸಸ್ಯಗಳಿಂದ ಮಾಡಿದ ದಂಡೆ ಹೂಮಾಲೆಗಳು, ಹೂಮಾಲೆಗಳು, ಪಟ್ಟಿಗಳು, ಗಡಿಗಳು ಅಥವಾ ಚೌಕಟ್ಟುಗಳು (ಸಸ್ಯಗಳು — ಸಸ್ಯಗಳಿಂದ ಮಾಡಿದ ಅಲಂಕರಣಗಳು ), ಹಾಗೂ ೩) ವರ್ತುಲಾಕಾರ ಅಥವಾ ಅಂಡಾಕೃತಿಯ ಮೊಹರುಗಳು (ವಂಶಲಾಂಛನಗಳು, ಧ್ವಜಗಳು, ಕಿರೀಟಗಳು, ಶಿಲುಬೆಗಳು, ಬಾಣಗಳು ಹಾಗೂ ಚಿಹ್ನೆಗಳು — ಮೊಹರುಗಳು.
ಡೈಮ್ಲರ್ -ಬೆನ್ಝ್/ಬೆನ್ಜ್ ಸಂಸ್ಥೆಯು ತಮ್ಮ ೧೯೨೮ರ ಅರ್ಜಿಯಲ್ಲಿ ನವೀನ ಲೋಗೋನ ಬಳಕೆ ಹಾಗೂ ಅದರ ನಿರೂಪಣೆಯನ್ನು ವಿವರಿಸುತ್ತದೆ. ಅವರ ವಿವರಣೆಯ ಅನುಸಾರ, ಪ್ರತಿ ವಾಹನ ಕಂಪೆನಿಯ ಪರಂಪರೆಯನ್ನು ಬಿಂಬಿಸುವ ವಿನ್ಯಾಸಾಂಶಗಳನ್ನು ಸಂಯೋಜಿಸಿ ಹೊಸ ಲೋಗೋವನ್ನು ರಚಿಸಲಾಗಿತ್ತು. ಅವರು ತಮ್ಮ ಸರಕುಗಳಿಗೆ ಲಾಂಛನವನ್ನು ಅಕ್ಟೋಬರ್ ೧೯೨೬ರಿಂದಲೇ ವ್ಯವಹಾರದಲ್ಲಿ ಬಳಸುತ್ತಿರುವುದಾಗಿ ಹಾಗೂ ಲಾಂಛನವು, "ಅರ್ಜಿದಾರರ ಪೂರ್ವಜರು ತಮ್ಮ ವ್ಯವಹಾರದಲ್ಲಿ ಹಾಗೂ ಅರ್ಜಿದಾರರ ವ್ಯವಹಾರದಲ್ಲಿ ಕೆಳಕಂಡ ದಿನಾಂಕಗಳಿಂದ ಸತತವಾಗಿ ಬಳಕೆಯಲ್ಲಿದೆ. ಮರ್ಸಿಡಿಸ್ ಎಂಬ ಪದವನ್ನು ಡಿಸೆಂಬರ್ ೧೯೦೦ರಿಂದ; ಬೆನ್ಝ್/ಬೆನ್ಜ್ ಎಂಬ ಪದವನ್ನು ಜುಲೈ ೧೮೯೬ರಿಂದ ; ಮೂರು-ಬಿಂದುಗಳ ನಕ್ಷತ್ರದ ಬಿಂಬವನ್ನು ೨೭ ಜೂನ್ ೧೯೦೯ರಿಂದ, ಲಾರೆಲ್ನ ಮಾಲೆಯ ಬಿಂಬವನ್ನು ಸೆಪ್ಟೆಂಬರ್, ೧೯೦೯ರಿಂದ ಬಳಸಲಾಗುತ್ತಿದೆ."[೩] ತಮ್ಮ U.S. ಲಾಂಛನ ಅರ್ಜಿಯಲ್ಲಿ ಡೈಮ್ಲರ್ -ಬೆನ್ಝ್/ಬೆನ್ಜ್ ತಮ್ಮ ಲಾಂಛನವನ್ನು ೨೧ ಆಗಸ್ಟ್ ೧೯೨೬ರಂದು ಸಲ್ಲಿಕೆಯಾದ ಅರ್ಜಿಯ ಮೇರೆಗೆ ೨೮ ಆಗಸ್ಟ್ ೧೯೨೮ರಂದು ಜರ್ಮನಿಯಲ್ಲಿ ನೊಂದಾಯಿಸಲಾಗಿತ್ತು.
U.S. ಲಾಂಛನ ನೊಂದಾಯಿಕೆಗೆ ೨೮ ಜುಲೈ ೧೯೩೧ರಂದು ಸಮ್ಮತಿ ನೀಡಲಾಯಿತು. ಅದರ ಪ್ರಸಕ್ತ ಸ್ಥಿತಿಯು ನೊಂದಾಯಿತವಾಗಿದ್ದು ಜರ್ಮನಿಯ ಸ್ಟಟ್ಗಾರ್ಟ್ನ ಡೈಮ್ಲರ್ AG ಸಂಸ್ಥೆಯು ಪ್ರಸಕ್ತ ನೂತನ ಮಾಲೀಕರಾಗಿ ನವೀಕೃತಗೊಂಡಿದೆ.[೩]
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(June 2008) |
೧೯೫೮ರಲ್ಲಿ, ಮರ್ಸಿಡಿಸ್-ಬೆನ್ಜ್ ಸ್ಟುಡ್ಬೇಕರ್ ಹಾಗೂ ಪ್ಯಾಕರ್ಡ್ ಬ್ರಾಂಡ್ ವಾಹನಗಳ ನಿರ್ಮಾಪಕ ಸಂಸ್ಥೆಯಾದ ಇಂಡಿಯಾನಾದ (USA) ಸೌತ್ ಬೆಂಡ್ನಲ್ಲಿನ ಸ್ಟುಡ್ಬೇಕರ್-ಪ್ಯಾಕರ್ಡ್ ಕಾರ್ಪೊರೇಷನ್ನೊಂದಿಗೆ ವಿತರಣಾ ಒಪ್ಪಂದ ಮಾಡಿಕೊಂಡರು. ಒಪ್ಪಂದದ ಪ್ರಕಾರ ಸ್ಟುಡ್ಬೇಕರ್ U.S.ನಲ್ಲಿನ ತನ್ನ ವಿತರಕ ಜಾಲವನ್ನು ಬಳಸಿಕೊಳ್ಳಲು ಮರ್ಸಿಡಿಸ್-ಬೆನ್ಜ್ಗೆ ಅವಕಾಶ ಮಾಡಿಕೊಡುವುದು ಹಾಗೂ ವಿತರಕರಿಗೆ ವಾಹನ ಸಾಗಣೆ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು, ಪ್ರತಿಯಾಗಿ ಮಾರಾಟವಾದ ಪ್ರತಿ ಕಾರಿಗೆ ನಿಗದಿತ ಮೊತ್ತವನ್ನು ಪಡೆಯುವುದು. ಸ್ಟುಡ್ಬೇಕರ್ ಜರ್ಮನ್ ವಾಹನ ನಿರ್ಮಾಪಕರ ಹೆಸರನ್ನು ತನ್ನ ಜಾಹಿರಾತುಗಳಲ್ಲಿ ಬಳಸಿಕೊಳ್ಳಬಹುದಾಗಿತ್ತು. ಇದು ಸ್ಟುಡ್ಬೇಕರ್'ನ ಪರಿಮಾಣಕ್ಕಿಂತ ಗುಣಮಟ್ಟಕ್ಕೆ ನೀಡುವ ಗಮನವನ್ನು ಹೆಚ್ಚು ಮಾಡಿತು.
ಸ್ಟುಡ್ಬೇಕರ್ ಯುನೈಟೆಡ್ ಸ್ಟೇಟ್ಸ್ನಲ್ಲಿ ಫೇಸಲ್ ವೆಗಾ ಎಕ್ಸಲೆನ್ಸ್ ಮಾಡೆಲ್/ಉತ್ಕೃಷ್ಟ ಮಾದರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದರ ಬಗ್ಗೆ ಫ್ರಾನ್ಸ್ ಮೂಲದ ಅಮೇರಿಕನ್ ವಾಹನ ನಿರ್ಮಾಪಕ ಸಂಸ್ಥೆಯಾದ ಫೇಸಲ್ ವೆಗಾನೊಂದಿಗೆ ಅನಧಿಕೃತ ಮಾತುಕತೆಗಿಳಿಯಿತು, ಈ ಪ್ರಸ್ಥಾಪಕ್ಕೆ ಮರ್ಸಿಡಿಸ್-ಬೆನ್ಜ್ ಅಸಮ್ಮತಿ ಸೂಚಿಸಿತು. ಭಾರೀ ನಷ್ಟವನ್ನು ತುಂಬಿಕೊಳ್ಳುವ ಸಲುವಾಗಿ ಮರ್ಸಿಡಿಸ್-ಬೆನ್ಜ್ನ ವಿತರಣಾ ಪಾವತಿಯ ಅಗತ್ಯವಿದ್ದ ಸ್ಟುಡ್ಬೇಕರ್ ಸಂಸ್ಥೆಯು ಯೋಜನೆಯಲ್ಲಿ ಮುಂದುವರೆಯಲಿಲ್ಲ.
ಸೌತ್ ಬೆಂಡ್ನಲ್ಲಿ ೧೯೫೮ರಿಂದ ೧೯೬೩ರವರೆಗೆ, ಸ್ಟುಡ್ಬೇಕರ್'ನ U.S. ಕಾರ್ಯಾಚರಣೆಯು ಕೊನೆಗೊಂಡಾಗ ಮರ್ಸಿಡಿಸ್-ಬೆನ್ಜ್ ಸ್ಟುಡ್ಬೇಕರ್ ಕಾರ್ಯಸ್ಥಳದಲ್ಲಿ ತನ್ನ ಕಛೇರಿಯನ್ನು ಏರ್ಪಡಿಸಿತ್ತು. U.Sನ ಸ್ಟುಡ್ಬೇಕರ್ ವಿತರಕರಲ್ಲಿ ಅನೇಕರು ಮರ್ಸಿಡಿಸ್-ಬೆನ್ಜ್ ವಿತರಕರಾಗಿ ಬದಲಾದರು. ಸ್ಟುಡ್ಬೇಕರ್ ತನ್ನ ಕೆನಡಾದ ಕಾರ್ಯಾಚರಣೆಯನ್ನು ೧೯೬೬ರಲ್ಲಿ ಕೊನೆಗೊಳಿಸಿ ವಾಹನ ನಿರ್ಮಾಣ ವ್ಯವಹಾರ ನಿಲ್ಲಿಸಿದ ನಂತರ, ಉಳಿದಿದ್ದ ಸ್ಟುಡ್ಬೇಕರ್ ವಿತರಕರಿಗೆ ತಮ್ಮ ವಿತರಣೆಯನ್ನು ಮರ್ಸಿಡಿಸ್-ಬೆನ್ಜ್ ವಿತರಣಾ ಒಪ್ಪಂದಕ್ಕೆ ಬದಲಿಸಿಕೊಳ್ಳುವ ಅವಕಾಶ ನೀಡಲಾಯಿತು.
ಮರ್ಸಿಡಿಸ್-ಬೆನ್ಜ್ ಪರಿಕರಗಳು Archived 2010-04-08 ವೇಬ್ಯಾಕ್ ಮೆಷಿನ್ ನಲ್ಲಿ. GmbH ಎಂಬುದು ಸ್ಟುಟ್ಟ್ಗಾರ್ಟ್-ವೈಹಿಂಗೆನ್ನಲ್ಲಿ ಕೇಂದ್ರ ಕಛೇರಿ ಹೊಂದಿರುವ, ೨೦೦೦ನೇ ಇಸವಿಯಲ್ಲಿ ಸ್ಥಾಪನೆಯಾದ ಸ್ವಾಯತ್ತ ಅಂಗಸಂಸ್ಥೆಯಾಗಿದೆ. ಈ ಸಂಸ್ಥೆಯ ವ್ಯವಹಾರಗಳಲ್ಲಿ ಕಾರಿನ ಪರಿಕರಗಳು, ಖಾಸಗಿ ಪರಿಕರಗಳು, ಸಂಗ್ರಹಾತ್ಮಕ ಹಾಗೂ ಪ್ರವರ್ತಕ ವಸ್ತುಗಳು ಹಾಗೂ ಉತ್ಪನ್ನ ವಿನ್ಯಾಸಗಳೂ ಸೇರಿದ್ದವು.[೪]
೧೯೯೮ರಲ್ಲಿ ಮರ್ಸಿಡಿಸ್-ಬೆನ್ಜ್ AMG ವಿಭಾಗವು ಮರ್ಸಿಡಿಸ್-ಬೆನ್ಝ್/ಬೆನ್ಜ್ನ ಮಾಲೀಕತ್ವದ ಪ್ರಧಾನ ವಿಭಾಗವಾಯಿತು.[೫] ೧೯೯೯ರಲ್ಲಿ ಡೈಮ್ಲರ್ ಕ್ರಿಸ್ಲರ್ನೊಂದಿಗೆ ಏಕೀಕರಣಗೊಂಡ ಕಂಪೆನಿಯು,[೬] ಮರ್ಸಿಡಿಸ್-ಬೆನ್ಜ್ AMG ಎಂಬ ಹೆಸರಿನಿಂದ ೧ ಜನವರಿ ೧೯೯೯ರಿಂದ ಜಾರಿಗೆ ಬಂದಿತು.[೭]
ಜರ್ಮನಿಯ ಡೈಮ್ಲರ್ AG.ಯು ಪ್ರಸ್ತುತ ಮರ್ಸಿಡಿಸ್-ಬೆನ್ಜ್ನ ಮಾಲೀಕತ್ವ ಹೊಂದಿದೆ.
ತನ್ನ ಉಪಕ್ರಮದಿಂದಲೂ ಮರ್ಸಿಡಿಸ್-ಬೆನ್ಜ್ ಗುಣಮಟ್ಟ ಹಾಗೂ ಬಾಳಿಕೆಯ ಬಗೆಗಿನ ಪ್ರಖ್ಯಾತಿಯನ್ನು ಉಳಿಸಿಕೊಂಡಿದೆ. ಪ್ರಯಾಣಿಕ ವಾಹನಗಳ ಮಾಪನೆಯ ಬಗ್ಗೆ J.D. ಪವರ್ನಂತಹಾ ವಸ್ತುನಿಷ್ಠ ಸಮೀಕ್ಷೆಗಳು, ೧೯೯೦ರ ದಶಕದ ಕೊನೆ ಹಾಗೂ ೨೦೦೦ದ ದಶಕದ ಆರಂಭದಲ್ಲಿ ಈ ವಿಚಾರದಲ್ಲಿ ಇಳಿಕೆ ತೋರಿಸಿದವು. ೨೦೦೫ರ ಮಧ್ಯದ ಹೊತ್ತಿಗೆ, J.D. ಪವರ್ನ ಪ್ರಕಾರ ಮಾಲೀಕತ್ವದ ಮೊದಲ ೯೦ ದಿನಗಳ ನಂತರದ ಸಮಸ್ಯೆಗಳ ಮೇಲೆ ಆಧಾರಿತವಾದ ಆರಂಭಿಕ ಗುಣಮಟ್ಟವು ತಾತ್ಕಾಲಿಕವಾಗಿ ಔದ್ಯಮಿಕ ಸರಾಸರಿಗೆ ಮರ್ಸಿಡಿಸ್ ಮರಳಿತ್ತು.[೮] ೨೦೦೭ರ ಮೊದಲ ತ್ರೈಮಾಸಿಕದ J.D. ಪವರ್'ನ ಪ್ರಾರಂಭಿಕ ಗುಣಮಟ್ಟ ಅಧ್ಯಯನದಲ್ಲಿ, ಮರ್ಸಿಡಿಸ್ ೨೫ನೇ ಸ್ಥಾನದಿಂದ ೫ನೇ ಸ್ಥಾನಕ್ಕೆ ಹಠಾತ್ ಸುಧಾರಣೆಯನ್ನು ಕಂಡಿತಲ್ಲದೇ, ಗುಣಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿದ್ದ ಟೊಯೊಟಾವನ್ನು ಹಿಂದೆ ಸರಿಸಿ, ತನ್ನ ವಿನ್ಯಾಸ ಮಾದರಿಗಳಿಗೆ ಪ್ರಶಸ್ತಿಗಳನ್ನು ಗಳಿಸಿತು.[೯] ೨೦೦೮ರ ಸಾಲಿನಲ್ಲಿ, ಮರ್ಸಿಡಿಸ್-ಬೆನ್ಜ್'ನ ಆರಂಭಿಕ ಗುಣಮಟ್ಟ ಶ್ರೇಯಾಂಕವು ಏರಿಕೆ ಕಂಡು ನಾಲ್ಕನೇ ಸ್ಥಾನದಲ್ಲಿ ಮತ್ತೊಂದು ಗರಿ ಮೂಡಿಸಿಕೊಂಡಿತು.[೧೦] ಈ ಪುರಸ್ಕಾರ ಮಾತ್ರವಲ್ಲದೇ, ಪ್ಲಾಟಿನಂ ಸ್ಥಾವರ ಗುಣಮಟ್ಟ ಪ್ರಶಸ್ತಿಯನ್ನು ತನ್ನ ಮರ್ಸಿಡಿಸ್’ ಸಿಂಡೆಲ್ಫಿಂಗೆನ್, ಜರ್ಮನಿ ಜೋಡಣಾ ಸ್ಥಾವರಕ್ಕೆ ಪಡೆಯಿತು.[೧೦] ೨೦೦೯ರ ಹಾಗೆ, ಯುನೈಟೆಡ್ ಸ್ಟೇಟ್ಸ್ನ ಗ್ರಾಹಕರ ವರದಿ ಯಲ್ಲಿ ಅನೇಕ ಮರ್ಸಿಡಿಸ್-ಬೆನ್ಜ್ ವಾಹನಗಳ ವಿಶ್ವಸನೀಯತೆಯ ಶ್ರೇಯಾಂಕವು "ಸಮಾಧಾನಕರ"ಕ್ಕೆ ಬದಲಾಗಿದೆಯಲ್ಲದೇ, E-ವರ್ಗ ಹಾಗೂ S-ವರ್ಗದ ವಾಹನಗಳನ್ನು ಶಿಫಾರಸು ಮಾಡುತ್ತಿದ್ದಾರೆ.[೧೧]
ಯುನೈಟೆಡ್ ಸ್ಟೇಟ್ಸ್ನಲ್ಲಿ, ಒಕ್ಕೂಟದ ಸಾಂಸ್ಥಿಕ ಸರಾಸರಿ ಇಂಧನ ಮಿತವ್ಯಯ ಕಟ್ಟುಪಾಡುಗಳನ್ನು ಪಾಲಿಸದ ಕಾರಣ, ಮರ್ಸಿಡಿಸ್-ಬೆನ್ಜ್ಗೆ US$೩೦.೬೬ ದಶಲಕ್ಷಗಳಷ್ಟು ದಾಖಲೆ ಮೊತ್ತದ ದಂಡವನ್ನು ೨೦೦೯ರಲ್ಲಿ ವಿಧಿಸಲಾಯಿತು.[೧೨] S೫೫೦, C೬೩ AMG, ಹಾಗೂ SLK೫೫ AMGಗಳೂ ಸೇರಿದಂತೆ ಯುನೈಟೆಡ್ ಸ್ಟೇಟ್ಸ್ನಲ್ಲಿ ಮಾರಾಟವಾಗುವ ನಿರ್ದಿಷ್ಟ ಮರ್ಸಿಡಿಸ್-ಬೆನ್ಜ್ ಕಾರುಗಳು ಹೆಚ್ಚುವರಿ ಅನಿಲ ಅತಿಬಳಕೆ ತೆರಿಗೆಗೆ ಒಳಪಡುತ್ತವೆ.[೧೩]
೨೦೦೮ರಲ್ಲಿ, ಎಲ್ಲಾ ಪ್ರಮುಖ ಐರೋಪ್ಯ ನಿರ್ಮಾಪಕ ಸಂಸ್ಥೆಗಳಲ್ಲಿ ಮರ್ಸಿಡಿಸ್ ನಿಕೃಷ್ಟತಮ CO೨ ಸರಾಸರಿಯನ್ನು ಹೊಂದಿದ್ದು ೧೪ ನಿರ್ಮಾಪಕ ಸಂಸ್ಥೆಗಳಲ್ಲಿ ೧೪ನೇ ಸ್ಥಾನ ಪಡೆದಿತ್ತು[೧೪]. ಮರ್ಸಿಡಿಸ್ ೨೦೦೭ ಹಾಗೂ ೨೦೦೬ಗಳಲ್ಲಿ ಕೂಡಾ ಸರಾಸರಿ CO೨ ಮಟ್ಟದ ವಿಚಾರದಲ್ಲಿ ಅನುಕ್ರಮವಾಗಿ ಪ್ರತಿ kmಗೆ ೧೮೧ g ಹಾಗೂ ೧೮೮ gಗಳಷ್ಟು CO೨ ಸೂಸುವಿಕೆಯೊಂದಿಗೆ ನಿಕೃಷ್ಟ ಸ್ಥಾನದಲ್ಲಿತ್ತು[೧೫].
ತನ್ನ ಉಗಮಸ್ಥಾನವಾದ ಜರ್ಮನಿಯಲ್ಲಲ್ಲದೆ ಮರ್ಸಿಡಿಸ್-ಬೆಂಝ್ ವಾಹನಗಳ ನಿರ್ಮಾಣ ಮತ್ತು ಉತ್ಪಾದನೆಯು ಈ ಕೆಳಕಂಡ ಸ್ಥಳಗಳಲ್ಲೂ ನಡೆಯುತ್ತದೆ:
ಪ್ರಯಾಣಿಕ ವಾಹನ, ಲಘುವಾಣಿಜ್ಯ ವಾಹನ ಮತ್ತು ಭಾರೀ ವಾಣಿಜ್ಯಸಂಬಂಧಿತ ಪರಿಕರಗಳಿಗಾಗಿ ಬೇಕಾದ ಸಕಲ ರೀತಿಯ ಸಾರಿಗೆ ವಾಹನ/ಸಾಧನಗಳು ಮರ್ಸಿಡಿಸ್-ಬೆನ್ಜ್ನಲ್ಲಿ ಕಂಡುಬರುತ್ತವೆ. ಉತ್ಪಾದನೆಯು ಜಾಗತಿಕ ಮಟ್ಟದಲ್ಲಿ ನಡೆಯುತ್ತದೆ. ದ ಸ್ಮಾರ್ಟ್ ಮಾರ್ಕ್ ಆಫ್ ಸಿಟಿ ಕಾರ್ಗಳು ಎಂಬ ನಗರಕ್ಕೆ ಯೋಗ್ಯವಾದ ಕಾರುಗಳು ೧೯೯೪ರಿಂದಲೂ ಮರ್ಸಿಡಿಸ್-ಬೆನ್ಜ್ ಗುಂಪಿನವರ ಒಂದು ಪ್ರಮುಖ ಅಂಗವೇ ಆಗಿದೆ.
ಪ್ರಯಾಣಿಕರಿಗಾಗೆಂದೇ ತಯಾರಿಸಿದ ಈ ಕೆಳಕಂಡ ಪ್ರಯಾಣಿಕ ವಾಹನಗಳು ೨೦೦೯ರಲ್ಲಿ ಉತ್ಪಾದನೆಗೊಳ್ಳುತ್ತಿದ್ದವು:
ಮರ್ಸಿಡಿಸ್ ಭಾಗಶಃ ಸ್ವಾಮ್ಯ ಹೊಂದಿರುವ ಟೀಮ್ ಮೆಕ್ಲಾರೆನ್-ಮರ್ಸಿಡಿಸ್ ಫಾರ್ಮುಲಾ ಒನ್ ಪಂದ್ಯದ ತಂಡಕ್ಕೆ ಮರ್ಸಿಡಿಸ್ ಸಹಯೋಗದೊಂದಿಗೆ ಮರ್ಸಿಡಿಸ್ ಎಂಜಿನ್ಗಳ ಕಾರುಗಳನ್ನು ನಿರ್ಮಿಸಿ ಕೊಡುವ ವಿಸ್ತೃತ ಶಾಖೆ ಮೆಕ್ಲಾರೆನ್ ಕಾರ್ರ್ಸ್ ಸಂಸ್ಥೆಯೊಂದಿಗೆ ಮಿತ-ಉತ್ಪಾದಿತ ಕ್ರೀಡಾವಾಹನ ಕಾರುಗಳನ್ನು ಕೂಡಾ ಮರ್ಸಿಡಿಸ್-ಬೆನ್ಜ್ ನಿರ್ಮಿಸಿದೆ. ೨೦೦೩ನೇ ಮಾದರಿಯ ಮರ್ಸಿಡಿಸ್-ಬೆನ್ಜ್ SLR ಮೆಕ್ಲಾರೆನ್ ಇಂಗಾಲ ಫೈಬರ್ ಕವಚವನ್ನು ಹಾಗೂ ೫.೪ ಲೀಟರ್ V8 ವಿಶೇಷಚಾರ್ಜ್ ಎಂಜಿನ್ ಅನ್ನು ಹೊಂದಿದೆ. ಇದು 460 kilowatts (625 PS; 617 bhp) ಹಾಗೂ 780 newton-metres (575 lbf⋅ft) ಭ್ರಾಮಕ ಪರಿಮಾಣವನ್ನು ನೀಡುವಂತೆ ಬದಲಿಸಿದ SL೫೫ AMG ಹಾಗೂ CLS೫೫ AMGಗಳಲ್ಲಿ ಬಳಸಲಾದ ಮಾದರಿಯದೇ ಸಿಲಿಂಡರ್ ಬ್ಲಾಕ್ ಆಗಿದೆ. SLR ವಾಹನವು ಗರಿಷ್ಠ 337 kilometres per hour (209.4 mph)ರಷ್ಟು ವೇಗ ತಲುಪಬಲ್ಲದಾಗಿದ್ದು ಸರಿಸುಮಾರು US$೫೦೦,೦೦೦ರಷ್ಟು ಬೆಲೆಯನ್ನು ಹೊಂದಿದೆ. ಐರೋಪ್ಯ ಪಾದಚಾರಿ-ರಕ್ಷಣಾ ನಿಯಮಗಳ ಕಾರಣದಿಂದಾಗಿ, ಮೆಕ್ಲಾರೆನ್ SLRನ ಉತ್ಪಾದನೆಯನ್ನು ೨೦೦೯ರಲ್ಲಿ ನಿಲ್ಲಿಸಲು ನಿರ್ಧರಿಸಿತು.[೩೦]
೧೯೯೪ರಲ್ಲಿ (೧೯೯೪ರ ಮಾದರಿಗಳೊಂದಿಗೆ), ಮರ್ಸಿಡಿಸ್-ಬೆನ್ಜ್ ವಾಹನಗಳ ರೂಢಿಗತ ನಾಮಾವಳಿಯು ಬದಲಾಯಿತು. ಕಂಪೆನಿಯ ಮೊದಲಿನ ದಿನಗಳಿಂದ ಆಗಿನವರೆಗೆ, ಎಂಜಿನ್ ಪಲ್ಲಟತೆಯು ಮೊದಲ ಮೂರು ಅಂಕಿಗಳ ಮೂಲಕ ಎಂಜಿನ್ ಮತ್ತು/ಅಥವಾ ಅಡಿಗಟ್ಟುಗಳ ವಿಧವನ್ನು ಕೊನೆಯ ಅಕ್ಷರ(ಗಳು) ಸೂಚಿಸುವಂತೆ; ಉದಾಹರಣೆಗೆ: ಇಂಧನ ಪೂರಣಕ್ಕೆ E (German: Error: {{Lang}}: text has italic markup (help)), ಡೀಸೆಲ್ಗೆ D , ದೀರ್ಘ-ಗಾಲಿಪೀಠಕ್ಕೆ L , ಇತ್ಯಾದಿಯಂತೆ (ಉದಾಹರಣೆಗೆ) 500Eಯ ಮಾದರಿಯಲ್ಲಿ ಹೆಸರುಗಳನ್ನಿಡಲಾಗುತ್ತಿತ್ತು.
೧೯೯೪ರಲ್ಲಿ, ಇದನ್ನು ಬದಲಿಸಿ ಮಾದರಿ ಅಥವಾ ವರ್ಗ ವನ್ನು ಸೂಚಿಸುವಂತೆ, German: Error: {{Lang}}: text has italic markup (help), ಮರ್ಸಿಡಿಸ್-ಬೆನ್ಜ್ ಪರಿಭಾಷೆಯಲ್ಲಿ ಹೇಳುವುದಾದರೆ ಹಾಗೂ ಎಂಜಿನ್ ಪಲ್ಲಟತೆಯನ್ನು ಸೂಚಿಸುವಂತೆ ಒಂದು ಅಂಕಿಯನ್ನು ಹೊಂದಿರುವಂತೆ ನಿಗದಿಪಡಿಸಲಾಯಿತು. ಅಂತ್ಯಪ್ರತ್ಯಯವನ್ನು ಕೆಲವೊಮ್ಮೆ ಹಾಗೆಯೇ ಉಳಿಸಿಕೊಳ್ಳಲಾಯಿತು, ಉದಾಹರಣೆಗೆ ದೀರ್ಘ ಗಾಲಿಪೀಠಕ್ಕೆ L ಹಾಗೂ ಡೀಸೆಲ್ಗೆ CDI (CDI = ಕಾಮನ್-ರೇಲ್ ಡೈರೆಕ್ಟ್ ಇಂಜೆಕ್ಷನ್). ಆದ್ದರಿಂದ, ಮೇಲಿನ ಉದಾಹರಣೆಯಲ್ಲಿ ೫೦೦E ನಂತರ E೫೦೦ ಆಯಿತು ("E-ಕ್ಲಾಸ್ಸೆ", ೫ ಲೀಟರ್ಗಳ ಪಲ್ಲಟತೆ). ಇನ್ನೊಂದು ಗಮನಿಸಬೇಕಾದ ವಿಷಯವೇನೆಂದರೆ ಹಿಂದೆ ಮಾದರಿ ಸಂಖ್ಯೆಯು ಎಂಜಿನ್ ಪಲ್ಲಟತೆಯನ್ನು ನಿರ್ದಿಷ್ಟವಾಗಿ ಸೂಚಿಸುತ್ತಿದ್ದುದಾದರೂ, ಪ್ರಸ್ತುತ ಹೀಗೆ ಆಗಿರಲೇಬೇಕೆಂದಿಲ್ಲ — ಉದಾಹರಣೆಗೆ E೨೦೦ CDI ಹಾಗೂ E೨೨೦ CDI ಎರಡೂ ೨.೨ ಲೀಟರ್ ಪಲ್ಲಟತೆಯನ್ನೇ ಹೊಂದಿವೆಯಲ್ಲದೇ C೨೪೦ ನಿಜವಾಗಿ ೨.೬ ಲೀಟರ್ ಎಂಜಿನ್ ಅನ್ನು ಹೊಂದಿದೆ.
೨೦೦೭ರ ಫ್ರಾಂಕ್ಪರ್ಟ್ ವಾಹನ ಪ್ರದರ್ಶನದಲ್ಲಿ, ನವೀನತಮ ಡಿಯೆಸ್ಒಟ್ಟೋ ಎಂಜಿನ್ನೊಂದಿಗೆ ಹೈಬ್ರಿಡ್ ಡ್ರೈವ್ ಹೊಂದಿರುವ F೭೦೦ ಕಾನ್ಸೆಪ್ಟ್ ಕಾರು ಸೇರಿದಂತೆ ಮರ್ಸಿಡಿಸ್-ಬೆನ್ಜ್ ಏಳು ಮಿಶ್ರ ಮಾದರಿಗಳನ್ನು ಪ್ರದರ್ಶಿಸಿತು.[೩೧][೩೨] ಮತ್ತೊಂದೆಡೆ, ಮರ್ಸಿಡಿಸ್-ಬೆನ್ಜ್ ೨೦೦೮ರ ನಂತರ ನಿದರ್ಶನಾತ್ಮಕ ವಿದ್ಯುತ್ ವಾಹನಗಳ ಪಡೆಯನ್ನು ಎರಡರಿಂದ ಮೂರು ವರ್ಷಗಳಲ್ಲಿ ರಸ್ತೆಗಿಳಿಸುವುದಾಗಿ ಹೇಳಿದೆ.[೩೩] ಮರ್ಸಿಡಿಸ್-ಬೆನ್ಜ್ S 400 BlueHYBRID[೩೪] ಕಾರನ್ನು ೨೦೦೯ರಲ್ಲಿ ಉಪಕ್ರಮಿಸುತ್ತಿದ್ದು, ಇದು ಲಿಥಿಯಮ್-ಐಯಾನ್ ಬ್ಯಾಟರಿ ಬಳಸುವ ವಿಶ್ವದಲ್ಲೇ ಮೊತ್ತ ಮೊದಲ ಉತ್ಪಾದಕ ಮಿಶ್ರಮಾದರಿಯ ವಾಹನವಾಗಲಿದೆ.[೩೫][೩೬] ೨೦೦೯ರಲ್ಲಿ, S೪೦೦ ಮಿಶ್ರಮಾದರಿಯ ಸಲೂನ್ಅನ್ನು ಮಾರಾಟಕ್ಕೆ ಬಿಡುಗಡೆ ಮಾಡಲುದ್ದೇಶಿಸಲಾಗಿದೆ.[೩೭]
೨೦೦೯ರ ನಾರ್ಥ್ ಅಮೇರಿಕನ್ ಇಂಟರ್ನ್ಯಾಷನಲ್ ಆಟೋ ಪ್ರದರ್ಶನದಲ್ಲಿ ಮರ್ಸಿಡಿಸ್-ಬೆನ್ಜ್ BlueZERO ಕಾರುಗಳನ್ನು ಪರಿಚಯಿಸಲಾಯಿತು.[೩೮][೩೯] ಮರ್ಸಿಡಿಸ್ ೨೦೦೯ರಲ್ಲಿ ನ್ಯೂ ಯುರೋಪಿಯನ್ ಡ್ರೈವಿಂಗ್ ಸೈಕಲ್ ಪ್ರದರ್ಶನದಲ್ಲಿ 19 miles (31 km)ನೊಂದಿಗೆ ಸಂಪೂರ್ಣ-ವಿದ್ಯುಚ್ಚಾಲಿತ ಶ್ರೇಣಿ ಹಾಗೂ ೭೪ ಗ್ರಾಮ್ಗಳ/km ಮಟ್ಟದ CO2 ಸೂಸುವಿಕೆಯೊಂದಿಗಿನ ವಿಷನ್ S500 PHEV ಪೆಟ್ರೋಲ್ ಕಾನ್ಸೆಪ್ಟ್ ವಾಹನವನ್ನು ಬಿಡುಗಡೆ ಮಾಡಿತು.[೪೦]
ಮರ್ಸಿಡಿಸ್-ಬೆನ್ಜ್ ಪ್ರಮುಖವಾಗಿ ಯುರೋಪ್ ಹಾಗೂ ಏಷ್ಯಾಗಳಿಗೆ ಬಸ್ಅನ್ನೂ ಉತ್ಪಾದಿಸುತ್ತದೆ.
WWIIನ ನಂತರ ಜರ್ಮನಿಯ ಹೊರಗೆ ನಿರ್ಮಿತವಾದ ಪ್ರಥಮ ಕಾರ್ಖಾನೆ ಅರ್ಜೆಂಟಿನಾದ್ದು. ಅದು ಮೂಲತಃ ಟ್ರಕ್ಗಳನ್ನು ನಿರ್ಮಿಸಿತಾದರೂ, ಅವುಗಳಲ್ಲಿ ಅನೇಕವನ್ನು ಪ್ರತ್ಯೇಕವಾಗಿ ಕಲೆಕ್ಟಿವೋ ಎಂದು ಜನಪ್ರಿಯವಾದ ಬಸ್ಗಳಾಗಿ ಬದಲಾಯಿಸಲಾಯಿತು. ಇಂದು ಅದು ಬಸ್ಗಳನ್ನು, ಟ್ರಕ್ಗಳನ್ನು ಹಾಗೂ ಸ್ಪ್ರಿಂಟರ್ ವ್ಯಾನುಗಳನ್ನು ನಿರ್ಮಿಸುತ್ತಿದೆ.
ಮರ್ಸಿಡಿಸ್-ಬೆನ್ಜ್ ಅನೇಕ ಶ್ರೇಣಿಯ ವ್ಯಾನುಗಳನ್ನು ಉತ್ಪಾದಿಸುತ್ತದೆ.
ಮರ್ಸಿಡಿಸ್-ಬೆನ್ಜ್ ಟ್ರಕ್ಗಳ ವಿಶ್ವದಲ್ಲೇ ಅತಿ ದೊಡ್ಡ ನಿರ್ಮಾಣ ಸಂಸ್ಥೆಯಾಗಿದೆ.[ಸೂಕ್ತ ಉಲ್ಲೇಖನ ಬೇಕು]
ಮರ್ಸಿಡಿಸ್-ಬೆನ್ಜ್ L-ಸರಣಿಯ ಟ್ರಕ್
ಪರಿಕರಗಳು[ಶಾಶ್ವತವಾಗಿ ಮಡಿದ ಕೊಂಡಿ] ೨೦೦೫ರಲ್ಲಿ ೩ ಹೊಸ ಬೈಸಿಕಲ್ಗಳನ್ನು GmbH ಪರಿಚಯಿಸಿತು, USD$೬೯೯ ನಂತರದ ಬೆಲೆಯ ಆಟೋಮ್ಯಾಟಿಕ್ ಬೈಕ್, USD$೯೯೯ರ ನಂತರದ ಫಿಟ್ನೆಸ್ ಬೈಕ್, USD$೧೩೯೯ರ ನಂತರದ ಮೌಂಟೆನ್ ಬೈಕ್ (ಬಿಡುಗಡೆಯಾದ ಕ್ಷಣದಲ್ಲಿ ದಾಖಲಿತ ಬೆಲೆಗಳಿವು).[೪೧] ಆಸ್ಟ್ರೇಲಿಯಾ,[೪೨] ಜರ್ಮನಿ, ಹಾಗೂ ರಷ್ಯಾಗಳಲ್ಲಿ ಇವುಗಳನ್ನು ಮಾರಲಾಗುತ್ತದೆ.[೪೩]
೧೯೨೬ರಲ್ಲಿ ಮರ್ಸಿಡಿಸ್-ಬೆನ್ಜ್ ಬ್ರಾಂಡ್ ಆಗಿ ವಿಲೀನಗೊಂಡ ಎರಡೂ ಕಂಪೆನಿಗಳು, ಪ್ರತ್ಯೇಕವಾಗಿದ್ದಾಗಲೇ ವಾಹನ ರೇಸಿಂಗ್ನಲ್ಲಿ ತಮ್ಮದೇ ಆದ ಯಶಸ್ಸಿನ ಇತಿಹಾಸ ಹೊಂದಿದ್ದವು - 1894ರಲ್ಲಿ ನಡೆದ ಪ್ಯಾರಿಸ್ನಿಂದ ರೂವೆನ್ವರೆಗಿನ ಪ್ರಥಮ ವಾಹನ ರೇಸ್ನಲ್ಲಿ ತಾವು ದಾಖಲಾಗಿದ್ದವು. ಇದು ಮುಂದುವರೆಯಿತಲ್ಲದೇ, ತನ್ನ ದೀರ್ಘಕಾಲೀನ ಇತಿಹಾಸದಲ್ಲಿ, ಕಂಪೆನಿಯು ಕ್ರೀಡಾ ವಾಹನ ಕಾರುಗಳ ರೇಸಿಂಗ್ ಹಾಗೂ ರ್ರ್ಯಾಲಿಯಿಂಗ್ಗಳೂ ಸೇರಿದಂತೆ ಅನೇಕ ಮಾದರಿಯ ವಾಹನಕ್ರೀಡೆಗಳ ಚಟುವಟಿಕೆಗಳಲ್ಲಿ ತೊಡಗಿದೆ. ಅನೇಕ ಸಂದರ್ಭಗಳಲ್ಲಿ ಮರ್ಸಿಡಿಸ್-ಬೆನ್ಜ್ ನಿರ್ದಿಷ್ಟ ಅವಧಿಯಲ್ಲಿ ಪ್ರಮುಖವಾಗಿ ೧೯೩೦ರ ದಶಕದ ಕೊನೆಯಲ್ಲಿ ಹಾಗೂ, ಮರ್ಸಿಡಿಸ್-ಬೆನ್ಜ್ 300SLR ಮತ್ತೊಂದು ಕಾರಿಗೆ ಬಡಿದು ೮೦ಕ್ಕೂ ಹೆಚ್ಚಿನ ಸಂಖ್ಯೆಯ ವೀಕ್ಷಕರನ್ನು ಸಾವಿಗೆ ದೂಡಿದ್ದ 1955ರ ಲೆ ಮಾನ್ಸ್ ಅನಾಹುತದ ನಂತರ ಸಂಪೂರ್ಣವಾಗಿ ವಾಹನ ರೇಸಿಂಗ್ನಿಂದೆ ಹಿಂದೆ ಸರಿದಿತ್ತು. ಮಧ್ಯದ ವರ್ಷಗಳಲ್ಲಿ ಆಗ್ಗಾಗ್ಗೆ ಕೆಲ ಚಟುವಟಿಕೆಗಳು ನಡೆದಿದ್ದರೂ, ಮರ್ಸಿಡಿಸ್-ಬೆನ್ಜ್ ೧೯೮೭ರವರೆಗೆ ಲೆ ಮಾನ್ಸ್, ಡಚ್ ಟೂರೆನ್ವ್ಯಾಗೆನ್ ಮೇಸ್ಟರ್ಷಾಫ್ಟ್ (DTM), ಹಾಗೂ ಸೌಬರ್ನೊಂದಿಗಿನ ಫಾರ್ಮುಲಾ ಒನ್ನಂತಹಾ ಮುಂಚೂಣಿಯ ಸ್ಪರ್ಧೆಗಳಲ್ಲಿ ಭಾಗವಹಿಸಿರಲಿಲ್ಲ.
೧೯೯೦ರ ದಶಕದಲ್ಲಿ ಮರ್ಸಿಡಿಸ್-ಬೆನ್ಜ್ ಬ್ರಿಟಿಷ್ ಎಂಜಿನ್ ನಿರ್ಮಾಣ ಸಂಸ್ಥೆ ಇಲ್ಮಾರ್ಅನ್ನು (ಈಗಿನ ಮರ್ಸಿಡಿಸ್-ಬೆನ್ಜ್ ಹೆಚ್ಚಿನ ಸಾಮರ್ಥ್ಯದ ಎಂಜಿನ್ಗಳು ಎಂಬ ಹೆಸರಿನಲ್ಲಿದೆ) ಕೊಂಡುದಲ್ಲದೇ, USAC/CART ನಿಯಮಗಳಡಿ ಇಂಡಿಕಾರ್ಸ್ ಅಭಿಯಾನವನ್ನು ಕೈಗೊಂಡು ಅಂತಿಮವಾಗಿ 1994ರ ಇಂಡಿಯಾನಾಪೊಲಿಸ್ 500 ಹಾಗೂ 1994ರ CART ಇಂಡಿಕಾರ್ ವಿಶ್ವ ಸರಣಿ ಚಾಂಪಿಯನ್ಶಿಪ್ ಅನ್ನು ಅಲ್ ಉನ್ಸೆರ್ Jr.ರ ಚಾಲನೆಯಲ್ಲಿ ಗೆಲುವು ಪಡೆಯಿತು. ೧೯೯೦ರ ದಶಕದಲ್ಲಿ FIA'ನ GT೧ ವರ್ಗದಲ್ಲಿ ಮೇಲುಗೈ ಪಡೆದು ಕಂಪೆನಿಯನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋದಂತಹಾ GT ರೇಸಿಂಗ್, ಹಾಗೂ ಮರ್ಸಿಡಿಸ್-ಬೆನ್ಜ್ CLK GTRಗಳಿಗೆ ಮರ್ಸಿಡಿಸ್-ಬೆನ್ಝ್/ಬೆನ್ಜ್ ಮರಳಿತು.
ಮರ್ಸಿಡಿಸ್-ಬೆನ್ಜ್ ಸಂಸ್ಥೆಯು ಪ್ರಸ್ತುತ ವಾಹನ ಕ್ರೀಡೆಗಳ ಮೂರು ವಿಧಗಳಾದ ಫಾರ್ಮುಲಾ ಥ್ರೀ, DTM ಹಾಗೂ ಫಾರ್ಮುಲಾ ಒನ್ಗಳಲ್ಲಿ ಭಾಗವಹಿಸುತ್ತಿದೆ.
ಫಾರ್ಮುಲಾ ಒನ್ನಲ್ಲಿ, ಕಂಪೆನಿಯು ಟೀಂ ಮೆಕ್ಲಾರೆನ್ ತಂಡದ ಭಾಗಶಃ ಒಡೆತನವನ್ನು ಹೊಂದಿದ್ದು, ಇಲ್ಮಾರ್ [೪೪] ನಿಂದ ನಿರ್ಮಿತವಾದ ೧೯೯೫ರಿಂದ ಎಂಜಿನ್ಗಳನ್ನು ತಂಡಕ್ಕೆ ಸರಬರಾಜು ಮಾಡುತ್ತಿದೆ. ಮಿಕಾ ಹಕ್ಕಿನೆನ್ ಮೂಲಕ ೧೯೯೮ ಹಾಗೂ ೧೯೯೯ರಲ್ಲಿ ಚಾಲಕರ ಚಾಂಪಿಯನ್ಷಿಪ್ಗಳು ಮತ್ತು ೨೦೦೮ರಲ್ಲಿ ಲೂಯಿಸ್ ಹ್ಯಾಮಿಲ್ಟನ್, ೧೯೯೮ರಲ್ಲಿ ಕನ್ಸ್ಟ್ರಕ್ಟರ್ಸ್ ಚಾಂಪಿಯನ್ಷಿಪ್ಗಳೂ ಗೆಲ್ಲುವಿಕೆಯ ಮೂಲಕ ಸೇರಿದಂತೆ ಈ ಪಾಲುದಾರಿಕೆಯು ಯಶಸ್ಸನ್ನು ನೀಡಿತು. ಮೆಕ್ಲಾರೆನ್ನೊಂದಿಗಿನ ಸಹಭಾಗಿತ್ವವು ಮರ್ಸಿಡಿಸ್-ಬೆನ್ಜ್ SLR ಮೆಕ್ಲಾರೆನ್ನಂತಹಾ ಸಾಮಾನ್ಯ ಬಳಕೆಯ ಕಾರುಗಳ ಉತ್ಪಾದನೆಯವರೆಗೆ ವಿಸ್ತರಿಸಿದೆ.
೨೦೦೭ರಲ್ಲಿ ಮರ್ಸಿಡಿಸ್ಗೆ ಫೆರ್ರಾರಿಯ ಗೋಪ್ಯ ತಾಂತ್ರಿಕ ಮಾಹಿತಿಯನ್ನು ಕದ್ದಿದ್ದಕ್ಕಾಗಿ ದಾಖಲೆಯ $೧೦೦ ದಶಲಕ್ಷದಷ್ಟು ದಂಡವನ್ನು ವಿಧಿಸಲಾಯಿತು[೪೫].
೨೦೦೯ರಲ್ಲಿ, ರಾಸ್ ಬ್ರಾನ್'ರ ನವೀನ ಕಲ್ಪನೆಯ ಫಾರ್ಮುಲಾ ಒನ್ ತಂಡ, ಬ್ರಾನ್ GP ಕನ್ಸ್ಟ್ರಕ್ಟರ್ಸ್ ಚಾಂಪಿಯನ್ಷಿಪ್ಅನ್ನು ಗೆಲ್ಲಲು, ಹಾಗೂ ಜೆನ್ಸನ್ ಬಟನ್ ಚಾಂಪಿಯನ್ ಆಗಲು F೧ ಡ್ರೈವರ್ಸ್' ಚಾಂಪಿಯನ್ಷಿಪ್ನಲ್ಲಿ ಮರ್ಸಿಡಿಸ್ ಎಂಜಿನ್ಗಳನ್ನೇ ಬಳಸಿತ್ತು. ಸಂಸ್ಥೆಯು ಮೆಕ್ಲಾರೆನ್ ಸಂಸ್ಥೆಯಲ್ಲಿನ ತನ್ನ ೪೦% ಪಾಲನ್ನು ಮೆಕ್ಲಾರೆನ್ ಗ್ರೂಪ್ಗೆ ಮರು ಮಾರಾಟ ಮಾಡಿತಲ್ಲದೇ ಅಬು ದುಬೈ ಮೂಲದ ಹೂಡಿಕೆ ಒಕ್ಕೂಟದೊಂದಿಗೆ ಜಂಟಿಯಾಗಿ ಬ್ರಾನ್ GP ತಂಡದ ೭೦%ನ ಒಡೆತನ ಹೊಂದಿದೆ. ಬ್ರಾನ್ GPಯನ್ನು ೨೦೧೦ರಲ್ಲಿ ಮರ್ಸಿಡಿಸ್ ಗ್ರಾಂಡ್ ಪ್ರಿಕ್ಸ್ ಎಂದು ಮರುನಾಮಾಂಕಿತಗೊಳಿಸಲಾಗುತ್ತಿದೆ.
ಅನೇಕ ಕಂಪೆನಿಗಳು ಆಯಾ ಮಾದರಿಯ ಸಾಮರ್ಥ್ಯ ಹಾಗೂ/ಅಥವಾ ಐಷಾರಾಮಿ ಸವಲತ್ತು ಹೆಚ್ಚಿಸಲು ಮರ್ಸಿಡಿಸ್ ಬೆನ್ಝ್/ಬೆನ್ಜ್ನ ಕಾರು ಟ್ಯೂನರ್ಗಳು/ಬದಲಿಕೆದಾರರು (ಅಥವಾ ಮಾರ್ಪಾಡುಗಾರರು)ಗಳಾಗಿ ಮಾರ್ಪಟ್ಟಿವೆ.
AMG is ಮರ್ಸಿಡಿಸ್-ಬೆನ್ಜ್'ನ ಆಂತರಿಕ ಸಾಮರ್ಥ್ಯ-ಹೊಂದಿಕಾ ವಿಭಾಗವಾಗಿದ್ದು, ಬಹಳಷ್ಟು ಮರ್ಸಿಡಿಸ್-ಬೆನ್ಝ್/ಬೆನ್ಜ್ ಕಾರುಗಳ ಹೆಚ್ಚಿನ ಸಾಮರ್ಥ್ಯದ ಆವೃತ್ತಿಗಳ ನಿರ್ಮಾಣದಲ್ಲಿ ತಜ್ಞತೆಯನ್ನು ಹೊಂದಿದೆ. ಎಲ್ಲಾ AMG ಎಂಜಿನ್ಗಳನ್ನು ಮಾನವಶಕ್ತಿಯಿಂದ ನಿರ್ಮಿಸಲಾಗುತ್ತದಲ್ಲದೇ,[೪೬] ಪ್ರತಿ ಪೂರ್ಣಗೊಂಡ ಎಂಜಿನ್ ಅದನ್ನು ನಿರ್ಮಿಸಿದ ವಾಸ್ತುಶಿಲ್ಪಿ/ಎಂಜಿನಿಯರ್ರ ಹಸ್ತಾಕ್ಷರವನ್ನು ಒಳಗೊಂಡ ಪಟ್ಟಿ ಹೊಂದಿರುತ್ತದೆ. AMGಯ ಸಂಪೂರ್ಣ ಮಾಲೀಕತ್ವವನ್ನು ಮರ್ಸಿಡಿಸ್-ಬೆನ್ಜ್ ೧೯೯೯ರಿಂದ ಹೊಂದಿದೆ.[೪೭] ಜರ್ಮನಿಯ ಫ್ರಾಂಕ್ಪರ್ಟ್ನಲ್ಲಿ ನಡೆದ, ೨೦೦೯ರ IAAನಲ್ಲಿ, ಮರ್ಸಿಡಿಸ್ ೩೦೦SL ಗುಲ್ವಿಂಗ್ನ ಪುನರುಜ್ಜೀವಿತ ಮಾದರಿ ಹಾಗೂ AMGಯಿಂದ ಅಭಿವೃದ್ಧಿಪಡಿಸಿದ ಮೊದಲ ಕಾರನ್ನಾಗಿ SLS AMGಯನ್ನು ಅಧಿಕೃತವಾಗಿ ಘೋಷಿಸಿತು.
ಅನೇಕ ಸ್ವತಂತ್ರ ಟ್ಯೂನರ್/ಬದಲಿಕೆದಾರ ಸಂಸ್ಥೆಗಳಿವೆ :
ಮರ್ಸಿಡಿಸ್-ಬೆನ್ಜ್ ವಾಹನಗಳಲ್ಲಿ ಅವುಗಳ ಉತ್ಪಾದನೆಯ ಅನೇಕ ವರ್ಷಗಳುದ್ದಕ್ಕೂ ಕೆಳಕಂಡ ಅನೇಕ ತಾಂತ್ರಿಕ ನಾವೀನ್ಯತೆಗಳನ್ನು ಪರಿಚಯಿಸಲಾಗಿದೆ:
ಅರ್ಧಶತಕದಷ್ಟು ವಾಹನ ಸುರಕ್ಷತಾ ನಾವೀನ್ಯತೆಗಳು ೨೦೦೭ರ ವಾಟ್ ಕಾರು? ಪ್ರಶಸ್ತಿಗಳಲ್ಲಿ ಸುರಕ್ಷತಾ ಪ್ರಶಸ್ತಿಯನ್ನು ಮರ್ಸಿಡಿಸ್-ಬೆನ್ಜ್ ಪಡೆಯುವಂತೆ ಮಾಡಿದೆ [೫೦]
೧೯೮೦ರ ದಶಕದಲ್ಲಿ, ಮರ್ಸಿಡಿಸ್, ಪ್ರೊಫೆಸರ್ ಎರ್ನೆಸ್ಟ್ ಡಿಕ್ಮನ್ಸ್ರ ತಂಡದೊಂದಿಗೆ ಬುಂಡೆಸ್ವೆಹ್ರ್ ಯೂನಿವರ್ಸಿಟಾಟ್ ಮುಂಚೆನ್ನಲ್ಲಿ ವಿಶ್ವದ ಮೊದಲ ರೋಬೋಟ್ ಕಾರನ್ನು ಅಭಿವೃದ್ಧಿಪಡಿಸಿತು.[೫೬] ಡಿಕ್ಮನ್ರ ಯಶಸ್ಸಿನಿಂದ ಭಾಗಶಃ ಉತ್ತೇಜಿತರಾಗಿ, ೧೯೮೭ರಲ್ಲಿ ೮೦೦ ದಶಲಕ್ಷ ಯೂರೋಗಳಿಗೆ ಸಮೀಪದ ಮೊತ್ತದಷ್ಟು ಅನುದಾನದೊಂದಿಗೆ ಐರೋಪ್ಯ ಒಕ್ಕೂಟದ EUREKA ವ್ಯವಸ್ಥೆಯು ಸ್ವಯಂಚಾಲಿತ ವಾಹನಗಳ ಪ್ರೊಮೆಥಸ್ ಯೋಜನೆಗೆ ಚಾಲನೆ ನೀಡಿತು. ೧೯೯೫ರಲ್ಲಿ, ಡಿಕ್ಮನ್ರ ಮರುವಿನ್ಯಾಸಿಸಿದ ಸ್ವಯಂಚಾಲಿತ S-ವರ್ಗದ ಮರ್ಸಿಡಿಸ್ ಬವೇರಿಯಾದ ಮ್ಯೂನಿಚ್ನಿಂದ ಡೆನ್ಮಾರ್ಕ್ನ ಕೋಪೆನ್ಹೇಗನ್ಅನ್ನು ತಲುಪಿ ಮರಳುವ ಯಾತ್ರೆಯ ಸಮಯದಲ್ಲಿ ಈ ಪ್ರಯತ್ನವು ಪರಾಕಾಷ್ಠೆ ಮುಟ್ಟಿತು. ಹೆದ್ದಾರಿಗಳಲ್ಲಿ, ರೋಬೋಟ್ 175 kilometres per hour (109 mph)ಕ್ಕೂ ಮೀರಿದ ವೇಗವನ್ನು ತಲುಪಿತ್ತು (ಸುಮಾರು ಗಂಟೆಗೆ ೧೧೦ ಮೈಲಿಗಳ ವೇಗ; ಜರ್ಮನ್ ಆಟೋಬಾಹ್ನ್ನ ಕೆಲ ಪ್ರದೇಶಗಳಲ್ಲಿ ಅನುಮತಿಸಿರುವ ಕಡೆಗಳಲ್ಲಿ). ಈ ಕಾರಿನ ಸಾಮರ್ಥ್ಯಗಳು ವಿಶ್ವಾದ್ಯಂತ ರೋಬೋಟ್ ಕಾರು ಸಂಶೋಧನೆಗಳು ಹಾಗೂ ಅದರ ಮೇಲಿನ ಹೂಡಿಕೆಗಳ ನಿರ್ಧಾರದ ಮೇಲೆ ಬಹಳಷ್ಟು ಪ್ರಭಾವ ಬೀರಿದೆ.
{{cite news}}
: Cite has empty unknown parameters: |month=
and |coauthors=
(help)