ಜಾಕಿ ಶ್ರಾಫ್ Jackie Shroff | |
---|---|
Born | ಜೈಕಿಶೆನ್ ಕಾಕುಭಾಯ್ ಜಾಕಿ ಶ್ರಾಫ್ ೧ ಫೆಬ್ರವರಿ ೧೯೫೭ ಮಹಾರಾಷ್ಟ್ರದ ಉದ್ಗೀರ್ ಜಿಲ್ಲೆಯ ಲಾಥೂರ್ |
Nationality | ಭಾರತೀಯ |
Other names | ಜಾಕಿ ಶ್ರಾಫ್ |
Occupation | ನಟ |
Years active | 1978-ಇಂದಿನವರೆಗೆ |
Known for | ಹೀರೋ,ಯುದ್ದ್ ಮತ್ತು ಕರ್ಮ. |
Spouse | ಆಯೆಷಾ ದತ್ (ವಿವಾಹ 1987) |
Children | ಟೈಗರ್ ಶ್ರಾಫ್ ಕೃಷ್ಣಾ ಶ್ರಾಫ್ |
Website | www |
ಜಾಕಿ ಶ್ರಾಫ್ (ಜೈಕಿಶೆನ್ ಕಾಕುಭಾಯ್ ಜಾಕಿ ಶ್ರಾಫ್) (ಜನನ 1 ಫೆಬ್ರುವರಿ 1957) ಭಾರತೀಯ ಚಿತ್ರ ನಟ.ಇವರು ಪ್ರಮುಖವಾಗಿ ಸುಮಾರು ನಾಲ್ಕು ದಶಕಗಳಿಂದ ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡುತಿದ್ದಾರೆ.ಕೊಂಕಣಿ, ಕನ್ನಡ, ಮರಾಠಿ, ಒರಿಯಾ, ಪಂಜಾಬಿ, ಬಂಗಾಳಿ, ಮಲಯಾಳಂ, ತಮಿಳು, ತೆಲುಗು ಭಾಷೆ ಸೇರಿ 200ರಕ್ಕು ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.[೧]
ಜಾಕಿ ಶ್ರಾಫ್ ರವರು ಕಾಕುಭೈ ಹರಿಲಾಲ್ ಶ್ರಾಫ್ ಮತ್ತು ರೀಟಾರ ಮಗನಾಗಿ ಫೆ. 1. 1957 ರಲ್ಲಿ ಮಹಾರಾಷ್ಟ್ರದ ಉದ್ಗೀರ್ ಜಿಲ್ಲೆಯ ಲಾಥೂರ್ ನಲ್ಲಿ ಜನಿಸಿದರು.ಜಾಕಿ ಶ್ರಾಫ್ ಆಯೆಷಾ ದತ್ ರನ್ನು 1987ರಲ್ಲಿ ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ,ಪುತ್ರ ಬಾಲಿವುಡ್ ನಟ ಟೈಗರ್ ಶ್ರಾಫ್ ಮತ್ತು ಮಗಳು ಕೃಷ್ಣ .[೨]
1982 ರಲ್ಲಿ, ಶ್ರಾಫ್, ದೇವ್ ಆನಂದ್ ಜೊತೆ ಸ್ವಾಮಿ ದಾದಾ ಚಿತ್ರದಲ್ಲಿ ಖಳ ನಟನಾಗಿ ಮೊದಲ ಚಲನಚಿತ್ರದಲ್ಲಿ ನಟಿಸಿದರು.1983 ರಲ್ಲಿ ಸುಭಾಷ್ ಘಾಯ್ ರವರು ಹೀರೋ ಚಿತ್ರದಲ್ಲಿ ನಟನ ಪಾತ್ರ ನೀಡಿದರು.ಚಿತ್ರ ಯಶಸ್ವಿಯಾಯಿತು,ನಂತರ ಇತರ ಹಲವಾರು ಚಲನಚಿತ್ರಗಳು ಯಶಸ್ವಿಯಾದವು.ಅವುಗಳ ಪೈಕಿ ಅಂದರ್ ಬಾಹರ್ ,ಜಾನೂ,ಕರ್ಮ ಮತ್ತು ಯುದ್ದ್ .
ಜಾಕಿ ಶ್ರಾಫ್, ಕೇರ್ ಆಫ್ ಫುಟ್ ಪಾತ್, ಅಣ್ಣ ಬಾಂಡ್ ಮತ್ತು ಅಮಾನುಷ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. [೪]